ದೇಶದಲ್ಲಿ ಕೋವಿಡ್ ಹೆಚ್ಚಳ: 269 ಹೊಸ ಪ್ರಕರಣ, 9 ಸಾವು

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 269 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳು 7,400ಕ್ಕೆ ಏರಿಕೆಯಾಗಿದ್ದು, ಒಂಬತ್ತು ಸಾವುಗಳು ಸಂಭವಿಸಿವೆ. ಮಹಾರಾಷ್ಟ್ರದಲ್ಲಿ 4, ಕೇರಳದಲ್ಲಿ 3, ತಮಿಳುನಾಡು ಮತ್ತು ರಾಜಸ್ಥಾನದಲ್ಲಿ ತಲಾ 1 ಸಾವು ದಾಖಲಾಗಿದೆ. ಕರ್ನಾಟಕದಲ್ಲಿ 132 ಸಕ್ರಿಯ ಪ್ರಕರಣಗಳು ದೃಢಪಟ್ಟಿದ್ದು, ಗುಜರಾತ್ (79), ಕೇರಳ (54) ಬಳಿಕದ ಸ್ಥಾನದಲ್ಲಿದೆ. ಈ ಅವಧಿಯಲ್ಲಿ 991 ಜನರು ಚೇತರಿಸಿಕೊಂಡಿದ್ದಾರೆ. ಒಟ್ಟು ಚೇತರಿಕೆಯ ಸಂಖ್ಯೆ 11,967ಕ್ಕೆ ತಲುಪಿದೆ.

Post a Comment

ನವೀನ ಹಳೆಯದು